ಎಲ್ಲಾ ಸುದ್ದಿಗಳು

ಬಳ್ಳಾರಿ: ಬೆಲೆ ಇದ್ದರೂ ಮೆಣಸಿನಕಾಯಿ ಕೊಳ್ಳುವವರಿಲ್ಲ

1 ನಿಮಿಷದ ಓದು

ಬಳ್ಳಾರಿಯಲ್ಲಿ 20 ಲಕ್ಷ ಚೀಲ ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್‌ನಲ್ಲಿ ಬಿದ್ದಿದೆ; ವ್ಯಾಪಾರಿಗಳು ರಫ್ತು ಮಾಡಲು ನೋಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಒಟ್ಟು ಕೃಷಿ ಪ್ರದೇಶ 1.73 ಲಕ್ಷ ಎಕರೆ. ಇದರಲ್ಲಿ 37,000 ಹೆಕ್ಟೇರ್ (ಹೆಕ್ಟೇರ್‌ಗೆ 2.5 ಎಕರೆ) ಮೆಣಸಿನಕಾಯಿ ಬೆಳೆಯಲಾಗಿದೆ. ಕೃಷಿ ಇಲಾಖೆ ಉಪನಿರ್ದೇಶಕ ಶರಣಪ್ಪ ಡಿ.ಭೋಗಿ ಪ್ರಕಾರ 8 ಲಕ್ಷ ಕ್ವಿಂಟಲ್ ಮೆಣಸಿನಕಾಯಿ ಬೆಳೆ ಬಂದಿದೆ.ಈಗಾಗಲೇ ಶೇ.60ರಷ್ಟು ಮಾರಾಟವಾಗಿದೆ. ಜಿಲ್ಲೆಯಲ್ಲಿ ಗುಂಟೂರು ಮತ್ತು ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಪ್ರತಿ ಕ್ವಿಂಟಲ್ ಉತ್ತಮ ಗುಣಮಟ್ಟದ ಗುಂಟೂರು ಮೆಣಸಿನಕಾಯಿ ₹ 15 ರಿಂದ ₹ 25 ಸಾವಿರಕ್ಕೆ ಮಾರಾಟವಾಗಿದೆ. ಬ್ಯಾಡಗಿ ತಳಿ ₹28 ಸಾವಿರದಿಂದ ₹40 ಸಾವಿರ.

ಇನ್ನಷ್ಟು ಸುದ್ದಿಗಳು